
ಕೊಕ್ಕರೆ ಬೆಳ್ಳೂರು
ಕೊಕ್ಕರೆ ಬೆಳ್ಳೂರು ಪಕ್ಷಿಗಳ ಸಂರಕ್ಷಣೆಗೆ ಮೀಸಲಾಗಿರುವ ಗ್ರಾಮ ಮತ್ತು ತೆರೆದ ಪಕ್ಷಿಧಾಮವಾಗಿದೆ. ವಲಸೆ ಬಂದ ಕೊಕ್ಕರೆಗಳಿಂದಾಗಿ ಈ ಊರಿಗೆ ಕೊಕ್ಕರೆ ಬೆಳ್ಳೂರು ಎಂಬ ಹೆಸರು ಬಂದಿದೆ. ಕೊಕ್ಕರೆ ಬೆಳ್ಳೂರು ಬೆಂಗಳೂರಿನ ಹೊರವಲಯದಲ್ಲಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. 2017 ರಲ್ಲಿ ವಿಶ್ವ ವನ್ಯ ಜೀವಿ ಫೆಡರೇಷನ್ -ಇಂಡಿಯಾ ಕೊಕ್ಕರೆ ಬೆಳ್ಳೂರು ಬಗ್ಗೆ ತಯಾರಿಸಿದ ಸಂಕ್ಷಿಪ್ತ ಆದರೆ ಅದ್ಭುತವಾದ ಸಾಕ್ಷ್ಯಚಿತ್ರ ನೋಡಿದ ಯಾರೇ ಆದರೂ ಕೊಕ್ಕರೆ ಬೆಳ್ಳೂರಿಗೆ ಭೇಟಿ ಕೊಡಲು ಉತ್ಸಾಹ ತೋರುವುದರಲ್ಲಿ ಸಂದೇಹವಿಲ್ಲ.

ದಾಂಡೇಲಿಯಲ್ಲಿ ಮಂಗಟ್ಟೆ ವೀಕ್ಷಣೆ
ದಾಂಡೇಲಿಯಲ್ಲಿ ಮಂಗಟ್ಟೆ ವೀಕ್ಷಣೆ: ಮಂಗಟ್ಟೆ (ಹಾರ್ನ್ಬಿಲ್) ಒಂದು ಸುಂದರ ಪಕ್ಷಿ ಪ್ರಭೇದವಾಗಿದ್ದು ಇತರ ಪಕ್ಷಿಗಳಿಗಿಂತ ವಿಭಿನ್ನವಾಗಿವೆ. ಮಂಗಟ್ಟೆ ದೊಡ್ಡ, ವಿಶಿಷ್ಟ ಆಕಾರದ ಹಳದಿ ಬಣ್ಣದ ಕೊಕ್ಕುಗಳನ್ನು ಹೊಂದಿರುವುದರಿಂದ ಗುರುತಿಸುವುದು ಬಹಳ ಸುಲಭ ಮತ್ತು ತನ್ನ ಈ ಬಣ್ಣದ ಕೊಕ್ಕಿನಿಂದಾಗಿ ಪಕ್ಷಿ ವೀಕ್ಷಕರ ಮತ್ತು ಛಾಯಾಗ್ರಾಹಕರ ಕಣ್ಮಣಿವಾಗಿದೆ. ಮಂಗಟ್ಟೆಗಳನ್ನು ಗುರುತಿಸಲು ಕರ್ನಾಟಕದ ದಾಂಡೇಲಿ ಅತ್ಯಂತ ಜನಪ್ರಿಯ ಸ್ಥಳವಾಗಿದೆ.

ಬೋನಾಳ ಪಕ್ಷಿಧಾಮ
ಬೋನಾಳ ಪಕ್ಷಿಧಾಮವು ಬೋನಾಳ ಸರೋವರವದ ದಂಡೆಯಲ್ಲಿರುವ ಸುರಪುರ ಎಂಬ ಊರಿನ ಬೋನಾಳ ಎಂಬ ಚಿಕ್ಕ ಹಳ್ಳಿಯಲ್ಲಿ ಇದೆ. ಕರ್ನಾಟಕದ ರಂಗನಾತಿಟ್ಟು ಪಕ್ಷಿಧಾಮದ ನಂತರ ಇದು ಎರಡನೇ ಅತಿದೊಡ್ಡ ಪಕ್ಷಿಧಾಮವಾಗಿದೆ. ಈ ಪಕ್ಷಿಧಾಮವನ್ನು 17ನೇ ಶತಮಾನದಲ್ಲಿ ಸುರಪುರದ ರಾಜ ಪಾಮ ನಾಯಕ ಕಟ್ಟಿಸಿದ್ದಾನೆ ಎಂದು ನಂಬಲಾಗಿದೆ. ಕಲ್ಲಿನ ಗುಡ್ಡಗಳಿಂದ ಆವೃತವಾಗಿರುವ ಈ ಸರೋವರಕ್ಕೆ ವಲಸೆ ಹಕ್ಕಿಗಳು ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಭೇಟಿ ನೀಡುತ್ತವೆ.

ರಂಗನತಿಟ್ಟು ಪಕ್ಷಿಧಾಮ
ಹೆಸರಾಂತ ಪಕ್ಷಿವಿಜ್ಞಾನಿ ಡಾ. ಸಲೀಮ್ ಅಲಿ ಅವರ ಮನವಿ ಮೇರೆಗೆ 1940 ರಲ್ಲಿ ಅಭಯಾರಣ್ಯವೆಂದು ಘೋಷಿಸಿದ ರಂಗನತಿಟ್ಟು ಪಕ್ಷಿಧಾಮವು ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದ್ದು, 0.67 ಸಣ್ಣ ಚದರ ಕಿ.ಮೀ. ಪ್ರದೇಶದಲ್ಲಿ ಹರಡಿದೆ. ಕಾವೇರಿ ನದಿಯ ದಡದಲ್ಲಿ ಸ್ಥಿತವಾಗಿರುವ ಈ ಪಕ್ಷಿ-ಸ್ವರ್ಗವು ವಾಸಿಸುವ ಪಕ್ಷಿಗಳಿಗೆ ಗೂಡುಕಟ್ಟುವ ಮತ್ತು ಯುರೋಪ್, ಅಮೆರಿಕಾ ಮತ್ತು ಸೈಬೀರಿಯಾದಿಂದ ವಲಸೆ ಬರುವ ಪಕ್ಷಿ ಪ್ರಭೇದಗಳಿಗೆ ಆದ್ಯತೆಯ ನೆಲೆಯಾಗಿದೆ.

ಕಾಳಿ ಹುಲಿ ಮೀಸಲು ಅಭಯಾರಣ್ಯ
ಕಾಳಿ ಹುಲಿ ಮೀಸಲು ಅರಣ್ಯವನ್ನು ಮೊದಲು ದಾಂಡೇಲಿ-ಅನ್ಶಿ ಟೈಗರ್ ರಿಸರ್ವ್ ಎಂದು ಕರೆಯಲಾಗುತ್ತಿತ್ತು, ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ (ಉತ್ತರ ಕೆನರಾ) ಜಿಲ್ಲೆಯ ಮಧ್ಯದಲ್ಲಿದೆ. ಕಾಳಿ ಟೈಗರ್ ರಿಸರ್ವ್ ಅರಣ್ಯವು ಹುಲಿಯಾಳ ಮತ್ತು ಕಾರವಾರ ಎಂಬ ಎರಡು ದೈತ್ಯ ಅರಣ್ಯಗಳ ಮಧ್ಯೆ ಇದೆ. ಮತ್ತು ಹುಲಿಯಾಳ, ಕಾರವಾರ್ ಮತ್ತು ಜೋಯಿಡಾ ತಾಲ್ಲೂಕುಗಳ ಭಾಗಗಳನ್ನು ಒಳಗೊಂಡಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
ಇಂದು ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಗ್ಗೆ ತಿಳಿದುಕೊಳ್ಳೋಣ.ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನವು260.51 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಉದ್ಯಾನವನದಲ್ಲಿ ಸಿಂಹ ಮತ್ತು ಹುಲಿಗಳ ಸಫಾರಿಯನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿರುವ ಸೌಂದರ್ಯವನ್ನು ಪ್ರಕೃತಿಯ ಮಡಿಲಲ್ಲಿರುವ ಪ್ರಾಣಿ-ಪಕ್ಷಿ,ಮರ-ಗಿಡಗಳು, ಗಿಡ-ಬಳ್ಳಿಗಳು ಇವುಗಳನ್ನೆಲ್ಲಾ ನೈಸರ್ಗಿಕವಾಗ ಇಲ್ಲಿ ಮರು ಸೃಷ್ಟಿಸುತ್ತಾರೆ.

ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ
ಈ ಅಭಯಾರಣ್ಯದ ಹೃದಯಭಾಗದಲ್ಲಿರುವ ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿರುವ ಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ದೇವತೆ ಮೂಕಾಂಬಿಕಾ ದೇವತೆಯ ಹೆಸರನ್ನು ಇಡಲಾಗಿದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯವು 370.37 ಚದರ ಕಿ.ಮೀ.ವರೆಗೆ ವ್ಯಾಪಿಸಿದೆ ಮತ್ತು ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಎಲೆ ಉದುರುವ ಕಾಡುಗಳು ಮತ್ತು ತೇಗದ ತೋಟಗಳ ಸಣ್ಣ ಪಟ್ಟಿಗಳೊಂದಿಗೆ ದಟ್ಟವಾಗಿದೆ.

ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ
ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟದಲ್ಲಿ 431 ಚದರ ಕಿ.ಮೀ ದೊಡ್ಡ ಸಂರಕ್ಷಿತ ಪ್ರದೇಶವಾಗಿದೆ. ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ ಶಿವಮೊಗ್ಗ ಜಿಲ್ಲೆಯಲ್ಲಿದೆ. ಶರವತಿ ಕಣಿವೆ ವನ್ಯಜೀವಿ ಅಭಯಾರಣ್ಯವು ಶ್ರೀ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಗಡಿಯಲ್ಲಿರುವ ಶರಾವತಿ ನದಿ ಜಲಾನಯನ ಪ್ರದೇಶವನ್ನು ಕೇಂದ್ರೀಕರಿಸಿದೆ.

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಉಡುಪಿ ಜಿಲ್ಲೆಯಲ್ಲಿರುವ 314 ಚದರ ಕಿ.ಮೀ ದೊಡ್ಡ ಸಂರಕ್ಷಿತ ವನ್ಯಜೀವಿ ಮೀಸಲು ಪ್ರದೇಶವಾಗಿದೆ. ಸೋಮೇಶ್ವರ ಪಶ್ಚಿಮ ಘಟ್ಟದ ಬುಡದಲ್ಲಿರುವ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಉತ್ತರದಲ್ಲಿ ಮೂಕಾಂಬಿಕಾ ಮತ್ತು ಶರಾವತಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಪೂರ್ವದಲ್ಲಿ ಕುಡುರೆಮುಖ ರಾಷ್ಟ್ರೀಯ ಉದ್ಯಾನವನದೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ.